ಇಂದು ಬಳ್ಳಾರಿ ಜಿಲ್ಲೆಯ ಕಂಪ್ಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಜನಪ್ರಿಯ ನಾಯಕರಾದ ಸನ್ಮಾನ್ಯ ಶ್ರೀ ಟಿ.ಎಚ್.ಸುರೇಶ್ ಬಾಬು ಅವರ ಅಮೃತ ಹಸ್ತದಿಂದ ಮೂಕ ಪ್ರಾಣಿಗಳ ಜೀವ ಉಳಿಸುವ ರೇಡಿಯಂ ಕಾಲರ್ ಬೆಲ್ಟ್ ಅಳವಡಿಸುವ ಅಭಿಯಾನಕ್ಕೆ ಚಾಲನೆ ನೀಡಿದರು.
ಕಾಲರ್ ಬೆಲ್ಟ್ ಉಪಯೋಗ= ರಾತ್ರಿ ಸಮಯದಲ್ಲಿ ಹೈವೇ ಹಾಗೂ ಇತರೆ ರಸ್ತೆಯಲ್ಲಿ ಬೀದಿನಾಯಿಗಳು ತಿರುಗಾಡುತ್ತವೆ. ರಾತ್ರಿ ಸಮಯದಲ್ಲಿ ನಾವು ವಾಹನ ಚಲಾಯಿಸುವಾಗ ಸಮಯದಲ್ಲಿ ಬೀದಿನಾಯಿಗಳು ನಮ್ಮ ವಾಹನಗಳಿಗೆ ಅಡ್ಡ ಬಂದುಎಷ್ಟೋ ಜನರ ಪ್ರಾಣಕ್ಕೆ ಹಾನಿಕರ ಆಗಿರುತ್ತದೆ, ಹಾಗೂ ಪ್ರಾಣಿಗಳಿಗೂ ಸಹ ಹಾನಿಕರ ಆಗಿರುತ್ತದೆ. ಆದಕಾರಣ ನಾಯಿಗಳಿಗೆ ಹಾಗೂ ಇತರೆ ರಸ್ತೆ ಬೀದಿಯಲ್ಲಿ ತಿರುಗಾಡುವ ಪ್ರಾಣಿಗಳ ಕೊರಳಿಗೆ ರೇಡಿಯಂ ಕಾಲರ್ ಬೆಲ್ಟ್ ಅಳವಡಿಸಿದರೆ ವಾಹನ ಚಾಲಕರಿಗೆ ಪ್ರಾಣಿಗಳು ರಸ್ತೆಯಲ್ಲಿ ಇರುವ 20 ಮೀಟರ್ ಅಂತರ ಸಮಯದಲ್ಲಿ ಪ್ರಾಣಿಗಳ ಕೊರಳಿನಲ್ಲಿರುವ ರೇಡಿಯಂ ಕಾಲರ್ ಬೆಲ್ಟ್ ಲೈಟ್ ಫೋಕಸ್ ನಿಂದ ಗುರುತಿಸಬಹುದು.