IMG 9577 Original 1024x1024

Launch Bajatham Foundation

ನಾವು ಸಮಾಜದ ಒಳಿತಿಗಾಗಿ ದುಡಿಯಬೇಕೆಂಬ ಉದ್ದೇಶದಿಂದ ಆರಂಭಿಸಿರುವ “ಭಜತಾಂ ಫೌಂಡೇಶನ್” ಅನ್ನು ಖ್ಯಾತ ಚಲನಚಿತ್ರ ನಟರಾದ ಚೇತನ್ ಅಹಿಂಸಾ ಅವರು ಇಂದು ಬೆಂಗಳೂರಿನಲ್ಲಿ ಉದ್ಘಾಟನೆ ಮಾಡಿದರು,ನಮಗೆ ಬೆಂಬಲವಾಗಿ ನಿಂತು ಪ್ರೋತ್ಸಾಹಿಸಿದ ಅವರಿಗೆ ನಮ್ಮ ತುಂಬು ಹೃದಯದ ಧನ್ಯವಾದಗಳು ..

ನಿಮ್ಮೆಲ್ಲರಿಗೂ ತಿಳಿದಿರುವಂತೆ ಈ ಹಿಂದೆ ನಾವು ನಮ್ಮ ಕಡೆಯಿಂದ ನಿರಾಶ್ರಿತರ ಆಶ್ರಮಕ್ಕೆ ಆ್ಯಂಬುಲೆನ್ಸ್ ಕೊಡುಗೆಯಾಗಿ ಕೊಟ್ಟಿದ್ದೆವು,ಆ ಆ್ಯಂಬುಲೆನ್ಸ್ ಇದುವರೆಗೂ ನೂರಾರು ಜನಕ್ಕೆ ಅನುಕೂಲವಾಗಿ ಜೀವ ಉಳಿಸುವಲ್ಲಿ ಮುಖ್ಯಪಾತ್ರ ವಹಿಸಿದೆ ಎಂಬ ಖುಷಿ ನಮಗಿದೆ.

ಈಗ  ಈ ಸೇವೆಯನ್ನು ಮುಂದುವರೆಸಿದ್ದು ನಮ್ಮ “ಭಜತಾಂ ಫೌಂಡೇಶನ್” ವತಿಯಿಂದ,ಸಿನಿಮಾದಲ್ಲಿ ದುಡಿಯುವ ಜ್ಯೂನಿಯರ್ ಆರ್ಟಿಸ್ಟ್ ಗಳ ಅನುಕೂಲಕ್ಕಾಗಿ ಸಹಕಲಾವಿದರ ಒಕ್ಕೂಟಕ್ಕೆ ಮತ್ತೊಂದು ಆ್ಯಂಬುಲೆನ್ಸನ್ನು‌ ಸದ್ಯದಲ್ಲೇ ಕೊಡುಗೆಯಾಗಿ ನೀಡಬೇಕೆಂದು ನಿರ್ಧರಿಸಿದ್ದೇವೆ,ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಸಹಕಲಾವಿದರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಯಾದರೂ ಈ ಆ್ಯಂಬುಲೆನ್ಸ್ ಅವರ ಸಹಾಯಕ್ಕಾಗಿ ಕಾದಿರುತ್ತದೆ.ಈ ಕೆಲಸಕ್ಕೆ ಕೆಲವು ನಟರು‌ ಮತ್ತು ನಿರ್ಮಾಪಕರು ತಮ್ಮ ಸಹಾಯ ಹಸ್ತ ಚಾಚಿದ್ದಾರೆ.

ನಮ್ಮ ಫೌಂಡೇಶನ್ ವತಿಯಿಂದ ಇದೇ ರೀತಿಯಲ್ಲಿ ಮುಂದೆ ಕೂಡ ಅವಶ್ಯಕತೆಯಿರುವ ಕಡೆಗಳಲ್ಲೆಲ್ಲ ಆ್ಯಂಬುಲೆನ್ಸ್ ನೀಡುವ ಗುರಿಯಿದೆ, ಇದರ ಜೊತೆ ಇನ್ನೂ ಹಲವು ಸಮಾಜಮುಖಿ ಕೆಲಸಗಳನ್ನು ಮಾಡಬೇಕೆಂಬ ಉದ್ದೇಶ ನಮ್ಮ  ಭಜತಾಂ ಫೌಂಡೇಶನ್ನಿಗಿದೆ.  ಈ ನಮ್ಮ ಕೆಲಸಗಳಿಗೆ  ನಿಮ್ಮ ಬೆಂಬಲ ಮತ್ತು ಸಹಕಾರ ಸದಾ ಇರಲಿ ..

Leave a Comment

Your email address will not be published. Required fields are marked *